ತುಮಕೂರು ವಿವಿಯ ನೂತನ ‘ಜ್ಞಾನಸಿರಿ’ ಕ್ಯಾಂಪಸ್ಗೆ ಕೆಎಸ್ಆರ್ಟಿಸಿ ದೈನಂದಿನ ಬಸ್ ಸಂಚಾರಕ್ಕೆ ಚಾಲನೆ: ಬಸ್ ಸೇವೆಗೆ ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್ ಗೌಡ ಚಾಲನೆ ನೀಡಿದರು. ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಕುಲಸಚಿವೆ ನಾಹಿದಾ ಜಮ್ ಜಮ್, ತುಮಕೂರಿನ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಕ ಎಸ್. ಚಂದ್ರಶೇಖರ್ ಇದ್ದಾರೆ. (09-10-2024)
ತುಮಕೂರು ವಿವಿಯಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯಲ್ಲಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ನಾಹಿದಾ ಜಮ್ ಜಮ್, ಪ್ರೊ. ಪ್ರಸನ್ನ ಕುಮಾರ್ ಕೆ., ಡಾ. ಮಂಜುನಾಥ್ ಎ. ಎಂ., ಡಾ. ಹೇಮಾವತಿ ಬಿ. ಎನ್., ಡಾ. ರಾಜಲಕ್ಷ್ಮೀ ಗೋವನಕೊಪ್ಪ, ಶ್ವೇತಾ ಓ. ಎಸ್. ಇದ್ದಾರೆ.(02-10-2024)
ತುಮಕೂರು ವಿವಿಯು ಸಮರ್ಥನಂ ಅಂಗವಿಕಲರ ಸಂಸ್ಥೆ (ರಿ.) ಸಹಯೋಗದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಕುಲಸಚಿವೆ ನಾಹಿದಾ ಜಮ್ ಜಮ್ ಉದ್ಘಾಟಿಸಿದರು. ಪ್ರೊ. ಪ್ರಸನ್ನಕುಮಾರ್ ಕೆ., ಪ್ರೊ. ಪರಶುರಾಮ ಕೆ. ಜಿ., ಸತೀಶ್ ಕೆ., ಸುಭಾಷ್ ಚಂದ್ರ ಎಸ್., ವಿನಾಯಕ್ ಪಿ. ಎಲ್. ಇದ್ದಾರೆ. (24-09-2024)
ಅಮೆರಿಕದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿರುವ ವಿಶ್ವದ ಶೇ. 2 ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ತುಮಕೂರು ವಿವಿಯ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಎಚ್. ನಾಗಭೂಷಣ, ಜೀವ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಗಿರೀಶ್ ಕೆ. ಎಸ್., ಗಣಿತಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕಿ ಡಾ. ಚಂದ್ರಾಲಿ ಬೈಶ್ಯ ಮತ್ತು ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸುರೇಶ್ ಡಿ. ಅವರನ್ನು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಗೌರವಿಸಿದರು. (21-09-2024)
ತುಮಕೂರು ವಿವಿಯು ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿಯಲ್ಲಿ ಬೆಂಗಳೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ. ಕೆ. ಸಿದ್ದಪ್ಪ, ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ನಾಹಿದಾ ಜಮ್ ಜಮ್, ಪ್ರೊ. ಪ್ರಸನ್ನ ಕುಮಾರ್ ಕೆ., ಡಾ. ಎ. ಎಂ. ಮಂಜುನಾಥ, ಇದ್ದಾರೆ. (05-09-2024)
ತುಮಕೂರು ವಿವಿ ಸ್ನಾತಕೋತ್ತರ ವ್ಯವಹಾರ ಆಡಳಿತ ಅಧ್ಯಯನ ವಿಭಾಗದ ವತಿಯಿಂದ ಆಯೋಜಿಸಿರುವ ‘ಉದ್ಯಮಶೀಲತಾ ಸಪ್ತಾಹ’ದ ಅಂಗವಾಗಿ ಮೂರು ದಿನಗಳ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಳ್ಳಲಾಗಿತ್ತು. ರಾಜೇಶ್ ಹಿರೇಮಠ್, ಡಾ. ಆರ್. ಎಲ್. ರಮೇಶ್ ಬಾಬು, ಪ್ರೊ. ಪ್ರಸನ್ನಕುಮಾರ್ ಕೆ., ಡಾ. ನೂರ್ ಅಫ್ಜಾ, ಕೋದಂಡರಾಮ ಎನ್., ಪ್ರೊ. ಮೋಹನ್ರಾಮ್, ಇಂಪಾ ಇದ್ದಾರೆ.(27-08-2024)
ತುಮಕೂರು ವಿಶ್ವವಿದ್ಯಾನಿಲಯದ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅಧ್ಯಯನ ಪೀಠ ಮತ್ತು ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಆಯೋಜಿಸಿದ್ದ ‘ಕರ್ನಾಟಕ ರೈತ ಚಳುವಳಿಯಲ್ಲಿ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅವರ ಪಾತ್ರ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಉದ್ಘಾಟಿಸಿದರು. ಡಾ. ಧನಂಜಯ ಬಿ. ಜಿ., ಪ್ರೊ. ಪ್ರಸನ್ನಕುಮಾರ್ ಕೆ., ಪ್ರೊ. ಜಯಶೀಲ, ಡಾ. ಮುನಿರಾಜು ಎಂ., ಪ್ರೊ. ರವೀಂದ್ರ ಕುಮಾರ್ ಬಿ., ವಿಲಾಸ್ ಎಂ. ಕದ್ರೋಳ್ಕರ್ ಇದ್ದಾರೆ. (21-08-2024)